T20 World Cup 2026: ಇಂದು ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ದಲ್ಲಿ ಭಾರತಕ್ಕೆ ಭರ್ಜರಿ ಜಯ!

T20 world cup 2026 ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಈ ಮಹತ್ವದ ಟೂರ್ನಿಗೂ ಮುನ್ನ ಇಂದು ನಡೆದ ಏಕೈಕ ಅಭ್ಯಾಸ ಪಂದ್ಯದಲ್ಲಿ ಡಿಫೆಂಡಿಂಗ್ ಚಾಂಪಿಯನ್ಸ್ ಭಾರತ ತಂಡವು ದಕ್ಷಿಣ ಆಫ್ರಿಕಾ ವಿರುದ್ಧ 30 ರನ್‌ಗಳ ಭರ್ಜರಿ ಜಯ ದಾಖಲಿಸಿ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದೆ. ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಈ ಹೈ-ಸ್ಕೋರಿಂಗ್ ಪಂದ್ಯವು ಅಭಿಮಾನಿಗಳಿಗೆ ರಸದೌತಣ ನೀಡಿತು.

ಪಂದ್ಯದ ಮುಖ್ಯಾಂಶಗಳು:

ಬ್ಯಾಟಿಂಗ್ ಅಬ್ಬರ: ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ, ಇಶಾನ್ ಕಿಶನ್ (53 ರನ್) ಮತ್ತು ತಿಲಕ್ವ ವರ್ಮಾ (45 ರನ್) ಅವರ ಸ್ಫೋಟಕ ಆಟದ ನೆರವಿನಿಂದ 240/6 ರನ್‌ಗಳ ಬೃಹತ್ ಮೊತ್ತ ಪೇರಿಸಿತು.

​ • ಹಾರ್ದಿಕ್ ಪಾಂಡ್ಯ ಮಿಂಚು: ಕೊನೆಯಲ್ಲಿ ಕೇವಲ 10 ಎಸೆತಗಳಲ್ಲಿ 30 ರನ್ ಚಚ್ಚಿದ ಹಾರ್ದಿಕ್ ಪಾಂಡ್ಯ ಭಾರತದಮೊತ್ತವನ್ನು 240ರ ಗಡಿ ತಲುಪಿಸಿದರು.

ದಕ್ಷಿಣ ಆಫ್ರಿಕಾ ಹೋರಾಟ: 241 ರನ್‌ಗಳ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡ ಟ್ರಿಸ್ಟಾನ್ ಸ್ಟಬ್ಸ್ (45* ರನ್) ಅವರ ಹೋರಾಟದ ನಡುವೆಯೂ 210/7 ರನ್‌ಗಳಿಗೆ ಸೀಮಿತವಾಯಿತು.

ಬೌಲಿಂಗ್ ವಿಭಾಗ: ಭಾರತದ ಪರ ಅಭಿಷೇಕ್ ಶರ್ಮಾ 2 ವಿಕೆಟ್ ಪಡೆದರೆ, ಅರ್ಷದೀಪ್ ಸಿಂಗ್ ಮತ್ತು ಅಕ್ಷರ್ ಪಟೇಲ್ ತಲಾ ಒಂದು ವಿಕೆಟ್ ಪಡೆದು ಗಮನ ಸೆಳೆದರು.

ವಿಶ್ವಕಪ್ ಅಭಿಯಾನದ ಆರಂಭ:​

ಈ ಪಂದ್ಯದ ಗೆಲುವು ಭಾರತ ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಭಾರತ ತನ್ನ ಮೊದಲ ಅಧಿಕೃತ ವಿಶ್ವಕಪ್ ಪಂದ್ಯವನ್ನು ಫೆಬ್ರವರಿ 7 ರಂದು ಅಮೆರಿಕ (USA) ವಿರುದ್ಧ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಆಡಲಿದೆ.

Leave a Reply

Your email address will not be published. Required fields are marked *