ಟಿ20 ವಿಶ್ವಕಪ್ 2026: ಮೊಹಮ್ಮದ್ ಸಿರಾಜ್ ಇನ್! ಹಾಗಾದರೆ ವಿಶ್ವಕಪ್ ಇಂದ ಹೊರ ಹೋದ ಆಟಗಾರ ಯಾರು ಟೀಮ್ ಇಂಡಿಯಾದಲ್ಲಿ ಬದಲಾವಣೆ.

T20 ವಿಶ್ವಕಪ್ 2026 ಮೊಹಮ್ಮದ್ ಸಿರಾಜ್ ಕುರಿತಾಗಿ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ದೊಡ್ಡ ಸುದ್ದಿ ಬಂದಿದೆ. ಹರ್ಷಿತ್ ರಾಣಾ ಗಾಯಗೊಂಡ ಹಿನ್ನೆಲೆಯಲ್ಲಿ ಅವರನ್ನು ತಂಡದಿಂದ ಹೊರಗಿಡಲಾಗಿದ್ದು, ಅವರ ಬದಲಿಗೆ ಅನುಭವಿಯಾದ ವೇಗ ಬೌಲರ್ ಮೊಹಮ್ಮದ್ ಸಿರಾಜ್ ಅವರನ್ನು ಭಾರತ ತಂಡಕ್ಕೆ ಆಯ್ಕೆ ಮಾಡಲಾಗಿದೆ.

ಟಿ20 ವಿಶ್ವಕಪ್ ಟೂರ್ನಿಯಿಂದ ಹರ್ಷಿತ್ ರಾಣ ಔಟ್!

ಐಪಿಎಲ್ ಹಾಗೂ ದೇಶೀಯ ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದ ಯುವ ವೇಗಿ ಹರ್ಷಿತ್ ರಾಣಾ ದುರದೃಷ್ಟವಶಾತ್ ಗಾಯದ ಸಮಸ್ಯೆಗೆ ತುತ್ತಾಗಿದ್ದಾರೆ.ಫೆಬ್ರವರಿ 4 ರಂದು ನವಿ ಮುಂಬೈನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಅಭ್ಯಾಸ ಪಂದ್ಯದ ವೇಳೆ ಹರ್ಷಿತ್ ರಾಣಾ ಅವರ ಬಲ ಮೊಣಕಾಲಿಗೆ ಗಾಯವಾಗಿತ್ತು.ಆದ್ದರಿಂದ ಟಿ20 ವಿಶ್ವಕಪ್‌ನಂತಹ ದೊಡ್ಡ ವೇದಿಕೆಯಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಲು ಕಾಯುತ್ತಿದ್ದ ರಾಣಾ ಅವರಿಗೆ ಇದು ದೊಡ್ಡ ಹಿನ್ನಡೆಯಾಗಿದೆ.

ಸಿರಾಜ್‌ಗೆ ಮತ್ತೆ ಒಲಿದ ಅದೃಷ್ಟ

ಹರ್ಷಿತ್ ರಾಣಾ ಅವರಂತಹ ಪ್ರತಿಭಾವಂತ ಆಟಗಾರನ ಕೊರೆತ ಕಾಣುವುದು ಸಹಜ ಆದರೆ ಸಿರಾಜ್ ಅವರ ಅನುಭವ ತಂಡಕ್ಕೆ ಬಲ ತುಂಬುವುದಂತೂ ಪಕ್ಕ.

• ​ಅನುಭವ: ಸಿರಾಜ್ ಈ ಹಿಂದೆ ಸಾಕಷ್ಟು ಅಂತರಾಷ್ಟ್ರೀಯ ಟಿ20, ಓಡಿಐ ಮತ್ತು ಟೆಸ್ಟ್ ಸರಣಿ ಹಾಡಿರುವಂತಹ ಅನುಭವಿ ಬೌಲರ್ ಅದರಲ್ಲೂ 2024ರ ಟಿ20 ವಿಶ್ವಕಪ್ ವಿಜೇತ ಭಾರತ ತಂಡದಲ್ಲಿ ಇದ್ದದ್ದು ಬಹಳ ಖುಷಿ.

​ವಾಪಸಾತಿ: 2024ರ ಜುಲೈನಲ್ಲಿ ಶ್ರೀಲಂಕಾ ವಿರುದ್ಧ ಕೊನೆಯ ಟಿ20 ಪಂದ್ಯ ಆಡಿದ್ದ ಸಿರಾಜ್, ಈಗ ಸುಮಾರು ಒಂದೂವರೆ ವರ್ಷದ ನಂತರ ಈ ಒಂದು ದೊಡ್ಡ ಟೂರ್ನಮೆಂಟ್ ಗೆ ವಾಪಸತಿ ಆಗಿದ್ದಾರೆ.

​ಬೌಲಿಂಗ್ ಶಕ್ತಿ: ಹೊಸ ಚೆಂಡಿನಲ್ಲಿ ಸ್ವಿಂಗ್, ಬೌನ್ಸರ್ ಮತ್ತು ಯಾರ್ಕರ್ ಸ್ಪೆಷಲಿಸ್ಟ್ ಆಗಿರುವ ಸಿರಾಜ್, ಜಸ್ಪ್ರೀತ್ ಬುಮ್ರಾ ಮತ್ತು ಅರ್ಶದೀಪ್ ಸಿಂಗ್ ಅವರೊಂದಿಗೆ ವೇಗದ ಬೌಲಿಂಗ್ ಪಡೆಯನ್ನು ಮುನ್ನಡೆಸಲಿದ್ದಾರೆ.

ಮೊಹಮ್ಮದ್ ಸಿರಾಜ್ ಅನುಭವಕ್ಕೆ ಮಣೆ ಹಾಕಿದ ಬಿಸಿಸಿಐ

ಗಾಯಾಳು ಹಾದಂತಹ ಹರ್ಷಿತ್ ರಾಣ ಬದಲಿಗೆ ಯಾರನ್ನು ಆಯ್ಕೆ ಮಾಡಬೇಕು ಎನ್ನುವ ಚರ್ಚೆ ನಡೆಯುತ್ತಿರುವಾಗ ಆಯ್ಕೆ ಮಂಡಳಿ ಕಣ್ಣಿಗೆ ಕಂಡದ್ದು “ಮಿಯ್ಯ ಬಾಯ್ ” ಹೆಸರಿನ ಮೊಹಮ್ಮದ್ ಸಿರಾಜ್.

ಅಭಿಮಾನಿಗಳಲ್ಲಿ ಭಾರಿ ಕುತೂಹಲ

ಈಗಾಗಲೇ ಭಾರತ ತಂಡವು ಎಷ್ಟೇ ಬಲಿಷ್ಠ ವಾಗಿದ್ದರೂ, ಪ್ರಮುಖ ಬೌಲರ್ ಬದಲಾವಣೆಯಾಗಿದ್ದು ನಮ್ಮ ಭಾರತ ತಂಡದ ರಣತಂತ್ರದ ಮೇಲೆ ಹೇಗೆಲ್ಲಾ ಪರಿಣಾಮ ಬೀರುತ್ತದೆ ಎಂದು ಕಾದು ನೋಡೋಣ.

ಟಿ20 ವಿಶ್ವಕಪ್ ನಂತಹ ದೊಡ್ಡ ಟೂರ್ನಮೆಂಟ್ ಗೆ ವೇಗದ ಬೌಲಿಂಗ್ ಮತ್ತು ಸ್ಪಿನ್ ಬೌಲಿಂಗ್ ಎರಡು ಕೂಡ ಮುಖ್ಯವಾಗಿರುತ್ತದೆ. ಆದ್ದರಿಂದ ನಮ್ಮ ವೇಗದ ಬೌಲಿಂಗ್ ವಿಭಾಗಕ್ಕೆ ಬರುವುದಾದರೆ ಅರ್ಶದೀಪ್ ಸಿಂಗ್, ಮೊಹಮ್ಮದ್ ಸಿರಾಜ್ ಮತ್ತು ಜಸ್ಪ್ರೀತ್ ಬುಮ್ರಾ ರಂತಹ ಯಾರ್ಕರ್ ಸ್ಪೆಷಲಿಸ್ಟ್ ಇರುವುದು ನಮ್ಮ ಟೀಮ್ ಗೆ ಇದು ಒಂದು ವರದಾನವಾಗಲಿದೆ.

ಇನ್ನು ಸ್ಪಿನ್ ವಿಭಾಗಕ್ಕೆ ಬರುವುದಾದರೆ ಟಿ20 ವರ್ಲ್ಡ್ ನಂಬರ್ ಒನ್ ಬೌಲರ್ ಆದಂತಹ ವರುಣ್ ಚಕ್ರವರ್ತಿ ಹಾಗೂ ಇನ್ನುಳಿದ ಸ್ಪಿನ್ ಬೌಲರ್ ಗಳು ಆದಂತಹ ಅಕ್ಸರ್ ಪಟೇಲ್ ಮತ್ತು ವಾಷಿಂಗ್ಟನ್ ಸುಂದರ ಇರುವುದು ಬಹಳ ಸಂತೋಷ ತಂದಿದೆ.

Leave a Reply

Your email address will not be published. Required fields are marked *