
ಬಿರಿಯಾನಿ ಇಷ್ಟಪಡುವವರಿಗೆ (Hyderabad Chicken Dum Biryani) ಅಂದರೆ ಪಂಚಪ್ರಾಣ. ಅದರಲ್ಲೂ ದಮ್ ಕೊಟ್ಟು ಮಾಡುವ ಆ ಪರಿಮಳವೇ ಬೇರೆ. ಅನೇಕ ಜನ ಈ ರೆಸೆಪಿ ಯನ್ನು ಮಾಡುವುದು ಕಷ್ಟ ಎಂದುಕೊಳ್ಳುತ್ತಾರೆ, ಆದರೆ ಸರಿಯಾದ ಮಸಾಲೆ ಮತ್ತು ಅಳತೆ ಬಳಸಿದರೆ ನೀವು ಮನೆಯಲ್ಲೇ ಹೋಟೆಲ್ ತರ ರುಚಿಯಾಗಿ ಮಾಡಿಕೊಳ್ಳಬಹುದು.”
ಈ Hyderabad Chicken Dum Biryani Kannada ರೆಸಿಪಿಗೆ ಬೇಕಾದ ಪದಾರ್ಥಗಳು ಸರಳವಾಗಿವೆ…
ಚಿಕನ್: ಅರ್ಧ ಕೆಜಿ
ಬಾಸ್ಮತಿ ಅಕ್ಕಿ: 2 ಕಪ್ (30 ನಿಮಿಷ ನೆನೆಸಿಟ್ಟಿದ್ದು)
ಮೊಸರು: 1 ಬಟ್ಟಲು
ಶುಂಠಿ-ಬೆಳ್ಳುಳ್ಳಿ ಪೇಸ್ಟ್: 2 ಚಮಚ
ಬಿರಿಯಾನಿ ಮಸಾಲೆ: 2 ಚಮಚ
ಪುದೀನಾ ಮತ್ತು ಕೊತ್ತಂಬರಿ ಸೊಪ್ಪು: 1 ಹಿಡಿ
ಹಸಿಮೆಣಸಿನಕಾಯಿ: 4-5
ಕರಿದ ಈರುಳ್ಳಿ (Fried Onions): 1 ಬಟ್ಟಲು (ಇದು ಬಿರಿಯಾನಿಗೆ ಚೆನ್ನಾಗಿ ರುಚಿ ನೀಡುತ್ತದೆ)
ತುಪ್ಪ ಮತ್ತು ಎಣ್ಣೆ: ಅಗತ್ಯಕ್ಕೆ ತಕ್ಕಷ್ಟು
ಉಪ್ಪು: ರುಚಿಗೆ ತಕ್ಕಷ್ಟು

ಮಾಡುವ ವಿಧಾನ (Step-by-Step Instructions):
(ಮ್ಯಾರಿನೇಷನ್): ಒಂದು ಪಾತ್ರೆಯಲ್ಲಿ ಚಿಕನ್ ತೆಗೆದುಕೊಂಡು ಅದಕ್ಕೆ ಮೊಸರು, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಖಾರ, ಉಪ್ಪು, ಬಿರಿಯಾನಿ ಮಸಾಲೆ, ಸ್ವಲ್ಪ ತುಪ್ಪ, ಸ್ವಲ್ಪ ಎಣ್ಣೆ ಮತ್ತು ಅರ್ಧ ಕಪ್ ಕರಿದ ಈರುಳ್ಳಿ ಹಾಕಿ ಚೆನ್ನಾಗಿ ಬೆರೆಸಿ 1 ಗಂಟೆ ಬಿಡಬೇಕು.
(ಅಕ್ಕಿ ಬೇಯಿಸುವುದು): ಒಂದು ದೊಡ್ಡ ಪಾತ್ರೆಯಲ್ಲಿ ನೀರು ಕಾಯಿಸಿ ಅದಕ್ಕೆ 2 ಏಲಕ್ಕಿ, 4-5 ಲವಂಗ, ಚಕ್ಕೆ, ಪಲಾವ್ ಎಲೆ ಹಾಕಿ ಅಕ್ಕಿಯನ್ನು 75-80% ರಷ್ಟು ಬೇಯಿಸಿ ನೀರು ಸೋಸಿಕೊಳ್ಳೋಣ.
(ಲೇಯರಿಂಗ್): ದಪ್ಪ ತಳದ ಪಾತ್ರೆ ತೆಗೆದುಕೊಂಡು ಸ್ವಲ್ಪ ಎಣ್ಣೆ ಹಾಕಿ ಎಣ್ಣೆ ಬಿಸಿಯಾದ ನಂತರ ಮ್ಯಾರಿನೇಟ್ ಮಾಡಿದ ಚಿಕನ್ ಹಾಕೋಣ 10-15ನಿಮಿಷ ಕಡಿಮೆ ಉರಿಯಲ್ಲಿ ಬೇಯಿಸಿ ಅದರ ಮೇಲೆ ಬೇಯಿಸಿದ ಅನ್ನವನ್ನು ಹಾಕೋಣ. ಅದರಮೇಲೆ ಪುದೀನಾ, ಕೊತ್ತಂಬರಿ ಸೊಪ್ಪು ಕರಿದ ಈರುಳ್ಳಿ ಮತ್ತು ತುಪ್ಪ ಹಾಕವುದು.
(ದಮ್ ಕೊಡುವುದು): ಪಾತ್ರೆಯ ಬಾಯಿಯನ್ನು ಮೈದಾ ಹಿಟ್ಟು ಅಥವಾ ಅಲ್ಯೂಮಿನಿಯಂ ಫಾಯಿಲ್ನಿಂದ ಅಥವಾ ಹಸಿಯಾದ ಕಾಟನ್ ಬಟ್ಟೆಯಿಂದ ಗಾಳಿ ಹೋಗದಂತೆ ಮುಚ್ಚಿ 20-25 ನಿಮಿಷ ಸಣ್ಣ ಉರಿಯಲ್ಲಿ ಬೇಯಿಸುವುದ ನಂತರ ರೆಡಿ ಆಯಿತು ನಮ್ಮ ರೆಸಿಪಿ ಈಗ ಸವಿಯಲು ಸಿದ್ದ.